ಪಾಕಿಸ್ತಾನೀಯರಿಗೆ ಕಸ ಗುಡಿಸಲೂ ಬರಲ್ವಾ, ಅದಕ್ಕೂ ಚೀನಾದಿಂದ ಬರ್ತಾರೆ!

Original link here

ಪಾಕಿಸ್ತಾನದಲ್ಲಿ ಚೀನಾ ಹೆದ್ದಾರಿಗಳನ್ನು ನಿರ್ಮಿಸುತ್ತಿದೆ. ಈ ಕೆಲಸಕ್ಕಾಗಿ ನೌಕರರನ್ನೂ ಕರೆದುಕೊಂಡು ಬರುತ್ತಿದೆ. ಪಾಕಿಸ್ತಾನೀಯರಿಗೆ ಕಸ ಗುಡಿಸಲೂ ಬರಲ್ವಾ? ಎಂಬ ಹೊಸ ಪ್ರಶ್ನೆ ಹುಟ್ಟುಕೊಂಡಿದೆ. ಇದನ್ನು ಕಿಶೋರ್ ನಾರಾಯಣ್ ವಿಶ್ಲೇಷಿಸಿದ್ದಾರೆ

ಪಾಕಿಸ್ತಾನದಲ್ಲಿ ಚೀನಾ ಸುಮಾರು 3 ವರ್ಷದಿಂದ ಒಂದು ಬೃಹತ್ ಹೆದ್ದಾರಿ ನಿರ್ಮಿಸುತ್ತಿದೆ. ಚೀನಾ- ಪಾಕಿಸ್ತಾನ ಆರ್ಥಿಕ ಮಾರ್ಗ (ಚೀನಾ- ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್) ಎಂದು ಕರೆಸಿಕೊಳ್ಳುವ ಈ ಹೆದ್ದಾರಿ ಉತ್ತರದಲ್ಲಿ ಖುಂಜಿರಬ್ ಪರ್ವತ ಮಾರ್ಗದಿಂದ ಪ್ರಾರಂಭವಾಗಿ ದಕ್ಷಿಣದಲ್ಲಿ ಗ್ವಾದರ್ ಬಂದರಿನವರೆಗೂ ವ್ಯಾಪಿಸಿದೆ.
ಖುಂಜಿರಬ್ ಪರ್ವತ ಮಾರ್ಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದು, ಈ ಹೆದ್ದಾರಿಯಿಂದಾಗಿ ಪಾಕಿಸ್ತಾನದಲ್ಲಿ ಸಾಕಷ್ಟು ಆರ್ಥಿಕ ಬೆಳವಣಿಗೆಯಾಗುವ ನಿರೀಕ್ಷೆಗಳಿವೆ. ಈ ಯೋಜನೆ ಉದ್ದೇಶ ಏನೆಂದರೆ, ಕಚ್ಚಾ ವಸ್ತುಗಳು ಒಂದು ಕಡೆಯಿಂದ ರವಾನಿಸಿ, ಇನ್ನೊಂದು ಕಡೆಯಿಂದ ಸಿದ್ಧಪಡಿಸಿದ ವಸ್ತುಗಳನ್ನು ಸಾಗಿಸುವುದು.
ಅಂದಹಾಗೆ, ಈ ಹೆದ್ದಾರಿಯ ನಿರ್ಮಾಣಕ್ಕೆ ತಗಲುವ ಖರ್ಚು ಬರೋಬ್ಬರಿ 54 ಬಿಲಿಯನ್ ಡಾಲರ್ ಗಳು. ಇದನ್ನು ಚೀನಾ ದೇಶವೇ ಭರಿಸುತ್ತಿದೆ. ಅದೂ ಸಾಲದ ರೂಪದಲ್ಲಿ ಪಾಕಿಸ್ತಾನಕ್ಕೆ ನೀಡುತ್ತದೆ. ಇದರ ಸಲುವಾಗಿ ಚೀನಾ ದೇಶವು ಪಾಕಿಸ್ತಾನದಲ್ಲಿ ಹಲವಾರು ಕಂಪನಿಗಳನ್ನು ಸ್ಥಾಪಿಸಿ, ಅವುಗಳ ಮೂಲಕ ಕೆಲಸ ಮಾಡಿಸುತ್ತಿದೆ.
ಇತ್ತೀಚೆಗೆ ಬಂದ ಸುದ್ದಿಯ ಪ್ರಕಾರ, ಈ ನಿರ್ಮಾಣ ಕಾರ್ಯದ ಸಮಯದಲ್ಲಿ ಶುಚಿತ್ವವನ್ನು ಕಾಪಾಡಲು ಪೌರಕಾರ್ಮಿಕರನ್ನೂ ಚೀನಾ ದೇಶವೇ ಕರೆದುಕೊಂಡು ಬಂದಿದೆ. ಇದು ವಿಡಂಬನೆಗೆ ಕಾರಣವಾಗಿದೆ. ಪಾಕಿಸ್ತಾನದವರಿಗೆ ಕಸ ಗುಡಿಸಲೂ ಬರುವುದಿಲ್ಲವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಲೇವಡಿ ಮಾಡಲಾಗುತ್ತಿದೆ.

ಸಾಲ ಕೊಟ್ಟ ಹಣ ವಾಪಸ್ ಚೀನಾಗೆ ಬರುತ್ತೆ
ಈ ರೀತಿ ವ್ಯಂಗ್ಯ ಒಂದು ಕಡೆಯಾದರೆ, ಇದರ ನಿಜವಾದ ಮರ್ಮ ಇನ್ನೊಂದಿದೆ. ಚೀನಾ ಹೀಗೆ ಸಾಲದ ರೂಪದಲ್ಲಿ ಕೊಟ್ಟರೂ ತನ್ನದೇ ಕೆಲಸಗಾರರು ಬಂದಿರುವುದರಿಂದ ಅವರಿಗೆ ಸಂಬಳದ ರೂಪದಲ್ಲಿ, ಕಚ್ಚಾ ವಸ್ತುಗಳ ಮಾರಾಟದ ರೂಪದಲ್ಲಿ, ಪಾಕಿಸ್ತಾನದಿಂದ ಚೀನಾ ತನ್ನ ದುಡ್ಡನ್ನು ವಾಪಸ್ ಪಡೆದುಕೊಳ್ಳುತ್ತಿದೆ.

ಪಾಕಿಸ್ತಾನ ಪತ್ರಿಕೆಗಳ ಸಂಪಾದಕೀಯ
ಬ್ರಿಟಿಷರು ನಮ್ಮ ದೇಶಕ್ಕೆ ಬಂದು ಈಸ್ಟ್ ಇಂಡಿಯಾ ಕಂಪನಿ ಪ್ರಾರಂಭಿಸಿರಲಿಲ್ಲವೇ? ಇದೂ ಹಾಗೆಯೇ. ಪಾಕಿಸ್ತಾನದ ಪ್ರಮುಖ ದಿನಪತ್ರಿಕೆಗಳ ಸಂಪಾದಕೀಯಗಳಲ್ಲಿ ಇದರ ಬಗ್ಗೆ ಈಗಾಗಲೇ ಬರವಣಿಗೆಗಳು ಬರುತ್ತಿವೆ. ಈ ಯೋಜನೆಯಿಂದ ಪಾಕಿಸ್ತಾನಕ್ಕೆ ಆಗುವ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಭೀತಿ ಅಲ್ಲಿನ ಜನರಲ್ಲಿ ಹುಟ್ಟಿದೆ.
ಶ್ರೀಲಂಕಾಗೂ ನೆರವು ನೀಡಿತ್ತು
ಈ ಆಲೋಚನೆ ಕೇವಲ ಭಯದಿಂದ ಬಂದಿರುವುದಲ್ಲ. ಇದರ ಹಿಂದೆ ಒಂದು ವಾಸ್ತವವೂ ಇದೆ. ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿರುವ ಹಾಗೆಯೇ ಸುಮಾರು 8-10 ವರ್ಷಗಳ ಹಿಂದೆ ಶ್ರೀಲಂಕಾಕ್ಕೂ ಚೀನಾ ನೆರವು ಮಾಡಿತ್ತು. ಹಂಬಂತೋಟ ನಗರದಲ್ಲಿ ದೇಶದ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ಹೊಸ ಬಂದರನ್ನೂ ನಿರ್ಮಿಸಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಲೇವಡಿ
ಆದರೆ ಜಾಗತಿಕ ಮಟ್ಟದಲ್ಲಿ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಶ್ರೀಲಂಕಾಕ್ಕೆ ಸಾಕಷ್ಟು ಮಟ್ಟದಲ್ಲಿ ಪ್ರವಾಸಿಗರು ಬರದೆ ಇದ್ದ ಕಾರಣದಿಂದಾಗಿ ಈ ಹೊಸ ನಿಲ್ದಾಣಕ್ಕೆ ಹಾರಾಡುತ್ತಿದ್ದ ವಿಮಾನಗಳನ್ನು ರದ್ದು ಮಾಡಲಾಯಿತು. ಈಗ ಈ ವಿಮಾನ ನಿಲ್ದಾಣ ಬಿಕೋ ಎನ್ನುತ್ತಿದೆ. ಇಡೀ ಜಗತ್ತಿನಲ್ಲಿ ಖಾಲಿ ಬಿದ್ದ ವಿಮಾನ ನಿಲ್ದಾಣಗಳ ಪೈಕಿ ಶ್ರೀಲಂಕಾದ ನಿಲ್ದಾಣಕ್ಕೆ ವಿಪರೀತ ಕುಖ್ಯಾತಿ ಇದೆ.
ಇಂತಹ ದುಸ್ಥಿತಿ ನಮಗೂ ಬರಬಹುದೇನೊ ಎಂಬ ಹೆದರಿಕೆ ಈಗ ಪಾಕಿಸ್ತಾನಕ್ಕೆ ಕಾಡಲಾರಂಭಿಸಿದೆ. ಒಂದು ವೇಳೆ ನಿಜವಾಗಿಯೂ ಹೀಗೆಯೇ ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇನ್ನು ಹೇಗೆ ಲೇವಡಿ ಮಾಡಬಹುದು?

Comments

Leave a Reply

Your email address will not be published. Required fields are marked *